Haridasa Sahitya — Vyasadasa

Srinivasa kalyana by Puranadara dasaru

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು(ಶ್ರೀನಿವಾಸ ಕಲ್ಯಾಣ)

Composer: Purandara Dasaru · Deity: Srinivasa / Venkatesha · Genre: Bhakti

Kannada lyrics

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ || ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ||೧|| ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ || ಹೇಳಿದೌಷದಮಾಡಿ ಕ್ರೋಢರೂಪಿಯ ಕಂಡು ಕೇಳಿ ಸ್ಥಳವನೆ ಕೊಂಡು ಲೀಲೆ ತೋರುತಲಿ ||೨|| ಇರುತಿರಲು ಒಂದಿನ ತುರಗವನೆ ಸ್ಮರಿಸುತಲಿ ತುರಗ ಬರಲು ಕಂಡು ಮುದದಿ ತಾನೇರಿ || ಪರಿಪರಿ ಮೃಗಗಳ ಅಡವಿಯಲಿ ಕೊಂದು ಕರುಣಾಸಾಗರ ಒಂದು ವನವ ಕಂಡನು ||೩|| ವನದಲ್ಲಿ ವನಜಾಕ್ಷಿ ರಾಜಪುರ್ತಿಯ ಕಂಡು ಮನಕೆ ಬಂದಂತಾಡಿ ಕಲಹ ಮಾಡಿದರು || ಮನಸಿಜಪಿತ ತಾನು ಅಶ್ವವ ಕಳಕೊಂಡು ಘನವಾದ ಗಿರಿ ಏರಿ ಮಲಗಿ…

Transliteration

Vaikuntapathi thaanu vaikuntavane bittu venkaatadhrige hogi sri kaantha nintha| Naalku kadeyu nodi valmikavane kandu ekanda sthalavendu bahu kaalavalli ithu|| shola bruthyanu siravanodadhe kaayava nodi thaalalaradhe swami gurugalane karesi heli oushadha maadi kroda roopiya kandu keli sthlavane kondu leele thoruthali iruthiralu ondhina thuragavae smarisuthali thuraga baralu kandu mudhadhi thaaneri…