Haridasa Sahitya — Vyasadasa

Sri vayudevarige nitavada(Vayu devara 32 lakshanagalu)

ಶ್ರೀವಾಯುದೇವರಿಗೆ ನೀತವಾದ |ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ

Composer: Haridasa · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಶ್ರೀವಾಯುದೇವರಿಗೆ ನೀತವಾದ |ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ||pa|| ತಾಲು ಜಾನುಗಳು ಸ್ತನ ತುದಿಯುನಾಸಿಕಚಕ್ಷು |ನಾಲಕ್ಕೊಂದು ದೀರ್ಘ ಜಂಘ ಗ್ರೀವ || ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ |ಮೇಲಾದ ತ್ವಕು ಬೆರಳುನಖಪಂಚ ಸೂಕ್ಷ್ಮ ||1|| ಕಕ್ಷಿ ಕುಕ್ಷಿಯು ವಕ್ಷಕರ್ಣನಖಸ್ಕಂದಾರು |ರಕ್ಷಘ್ನನಿಗೆ ಶೋಭಿಪವು ಉನ್ನತ ||ಅಕ್ಷಿಚರಣಕರನಖಅಧರಜಿಹ್ವೇಣುಜಿಹ್ವೆ|ಮೋಕ್ಷದನ ಈ ಏಳು ಅವಯವವು ರಕ್ತ ||2|| ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |ಉತ್ತಮಲಲಾಟಉರದ್ವಯ ವಿಸ್ತಾರಾ || ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ||3||

Transliteration

Sri vayudevarige nitavada | Muvatteradu salakshanagalanu varnisuve || pallavi || Talu janugalu stanatudiyu nasika cakshu | Nalakkondu dhirga jange griva | Alimga prushtha nalku hrasva kesarada | Melada tvaku beralu naka beralu naka panca sukshma || 1 || Kakshi kukshiyu vaksha karna nakaskandharu | Rakshaj~janige sobipudu unnata | Akshi carana naka adhara jihvenujihve | Mokshadana I elu avayavu rak…