Haridasa Sahitya — Vyasadasa

Sri tulasiya sevisi

ಶ್ರೀ ತುಳಸಿಯಾ ಸೇವಿಸಿ

Composer: Vijaya Dasaru · Deity: Tulasi · Genre: Bhakti

Kannada lyrics

ಶ್ರೀ ತುಳಸಿಯಾ ಸೇವಿಸಿ ||ಪ|| ಶ್ರೀ ತುಳಸಿಯಳಾ ಸೇವೆ ಪ್ರೀತಿಯಿಂದಲಿ ಮಾಡೆ | ಗಾತರದ ಮಲವಳಿದು ಮಾತೆಯೆಂಬನಿತರೊಳು | ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯ ||ಅ.ಪ|| ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುಮನಾಭನು ತಾನು ಉದುಭವಿಸಿ ಬರಲಂದು ಉದುರಿದವು ಕಣ್ಣಿಂದ | ಉದಕವುತ್ಸಹದಿಂದಲದೆ ತುಳಸಿನಾಮವಾಗೆ | ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲ್ಲಿ ನಿತ್ಯ ಸ | ತ್ಪದವಿಗೆ ಸಿದ್ಧವೆಂದು ಮುದದಿಂದ ತಿಳಿದು ವೃಂದಾವನ ರಚಿಸಿದರೈಯ್ಯಾ ||೧|| ಮೂಲದಲಿ ಸರ್ವತೀರ್ಥಗಳುಂಟು ತನ್ಮಧೈ | ಕಾಲಮೀರದೆ ಸರ್ವ ನದನದಿಗಳಮರಗಣ | ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು ವಾಲಯವಾಗಿಪ…

Transliteration

Sri tulasiya sevisi || pa || Sri tulasiyala seve pritiyindali made | Gatarada malavalidu mateyembanitarolu | Pataka pariharisi punitaranu maduvalu yatakanumanavayya || a. Pa || Sudhegadala mathisuva samayadali vaidyanagi | Adumanabanu tanu udubavisi baralamdu uduridavu kanninda | Udakavutsahadindalade tulasinamavage | Tridasarondisuta modadim kondadidaru | Odagi sujanaru tamma sadanadalli nitya sa…