Haridasa Sahitya — Vyasadasa

Sri tulasi mahimeyadu

ಶ್ರೀ ತುಳಸಿ ಮಹಿಮೆಯದು

Composer: Prasanna Venkata Dasaru · Deity: Tulasi · Genre: Dasara Pada

Kannada lyrics

ಶ್ರೀ ತುಳಸಿ ಮಹಿಮೆಯದು ಪೊಗಳಲಳಿವಿಲ್ಲ ಶ್ರೀ ನಾಥ ನಾರಾಯಣನ ಅರ್ಚನೆಗೆ ಸರ್ವದಾ ಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರ ಭಾಗ್ಯವೆಂತೊ ||ಪ|| ಶ್ರೀ ಮದಾರ್ಚಿತ ಕ್ಷೀರವಾರಿಧಿಯ ಮಥಿಸುತಿರೆ ಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟ ಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿ ಭೂಮಿ ಪಾವನವ ಮಾಡುತಲಿ ಭೂನಿರ್ಜರರ ಧಾಮ ಧಾಮಗಳಲ್ಲಿ ವೃಂದಾವನದಿ ನೆಲೆಸಿ ಕಾಮಿತ ಫಲನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ. || ೧ || ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃ- ಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯ ಕೋಮಲ ದಳವನೊಂದು ತಂದು ಶ್ರೀ ಮಾಧವನ ಚರಣ ತಾಮರಸಕರ್ಪಿಸುವದು ತಾ ಮುನ್ನ ಮಾಡಿದಘ ಪಂಚಕಗಳೋಡಿದವು…

Transliteration

SrI tuLasi mahimeyadu pogaLalaLivilla SrI nAtha nArAyaNana arcanege sarvadA prItikaraLAgi rAjipaLu kaliyugadalli nOntavara BAgyavento ||pa|| SrI madArcita kShIravAridhiya mathisutire A mahAviShNuvina nEtradindali horaTa prEmajaladudBavisi naLanaLisi divya AmOda pUrNaLAgi BUmi pAvanava mADutali BUnirjarara dhAma dhAmagaLalli vRundAvanadi nelesi kAmita PalanIva kalyANi kRuShNanige nEmadiM priyaLAda.…