Haridasa Sahitya — Vyasadasa

Sri raghavendra nimma

ಶ್ರೀ ರಾಘವೇ೦ದ್ರ ನಿಮ್ಮ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ ಸಾರಿದೆ ಶರಣ ಮ೦ದಾರ ಕರುಣವ || ಪ || ಘೋರ ಭವ ವನಧಿ ತಾರಿಸು ಕರುಣದಿ ಸೂರಿ ಸುಧೀ೦ದ್ರ ಕುಮಾರ ಉದಾರ || ಅ || ಮುನಿರಾಯ ನಿಮ್ಮ ಪಾದವನರುಹ ಧ್ಯಾನ ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ ಧನವ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ಪ್ರತಿದಿನ ದಣಿದಣಿಸುವುದು ಘನವೇ ಗುರುಪಾವನತರಚರಿತ || ೧ || ಮೂಲರಾಮನಪಾದ ಕೀಲಾಲಜ ಮಧುಪ ಬಾಲನ ಬಿನ್ನಪ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸ೦ತಾಪ ಕೇಳೊ ವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಪತಿ ಕೋಲನ೦ದಿನಿ ಕೂಲಗ ವರಮ೦ತ್ರಾಲಯನಿಲಯ || ೨ || ಕಲಿಕಲ್ಮಷದೂರ ಕುಜನಕುಠಾರ ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ ಗಳಶೋಭಿ…

Transliteration

Sri raghavendra nimma carucaranava Saride sarana mandara karunava || pa || Gora Bava vanadhi tarisu karunadi Suri sudhindra kumara udara || a || Muniraya nimma padavanaruha dhyana Pranava sustavana arcane malpa nana Janara vancitaviva gunaganapurna j~jana Dhanava palisenagikshana ninnadhina Manujana pratidina danidanisuvudu Ganave gurupavanataracarita || 1 || Mularamanapada kilalaja madhupa Balana…