Haridasa Sahitya — Vyasadasa

Sri Raama suladhi(Ramayana story)

ಧ್ರುವತಾಳ

Composer: Vijaya Dasaru · Deity: Rama · Genre: Sulaadi

Kannada lyrics

ಧ್ರುವತಾಳ ರಾಜ ರಾಜ ರಮಣಿ ರಾಜಶೇಖರ ವಿನುತಾ ರಾಜ ತೇಜೋನಿಧಿ ರಾಜಾಧೀಶಾ ರಾಜ ಹಂಸ ನಯನ ರಾಜಶೇಖರ ವಿ ರಾಜಿತ ಕೀರ್ತಿ ಗಜ ರಾಜವರದಾ ರಾಜ ವದನಾ ರಿಪು ರಾಜಮಸ್ತಕ ಶೂಲಾ ರಾಜ ರಾಜೋತ್ತಮ ರಾಜವಿನುತಾ ರಜೀವದೊಳಗಿದ್ದ ರಾಜೀವನ ಪಾಲಿಸಿದ ರಾಜ ಮಾರ್ತಾಂಡ ದ್ವಿಜರಾಜ ಗಮನಾ ರಾಜ ರಾಜರು ನಿನ್ನ ರಾಜಿಸುವ ಚರಣ ರಾಜೀವದಲ್ಲಿ ವಾಲಗ ಮಾಳ್ಪರೂ ರಾಜ ರಾಜಾಗ್ರಗಣ್ಯ ರಾಜಾಭಿಷೇಕಕ್ಕೆ ರಾಜ ನೀನಲ್ಲದೆ ರಾಜರುಂಟೇ ರಾಜಗಂಭೀರ ಅಪರಾಜಿತನಾಮ ನಮ್ಮ ವಿಜಯ ವಿಠ್ಠಲ ರಂಗರಾಜ ರಾಜ ಸಮುದ್ರರಾಜ ಶಯನನೇ ||1|| ಮಟ್ಟತಾಳ ದಶಶಿರನೆಂಬುವನು ಅಸಮ ವೀರನಾಗಿ ಬಿಸಿನಿಧಿ ಮಧ್ಯದಲ್ಲಿ ತ್ರಿದಶರ ಶೆರೆ ಇಡಲು ದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತ ಪಶುಪನ ವರದಿಂದ…

Transliteration

dhruvatALa rAja rAja ramaNi rAjaSEKara vinutA rAja tEjOnidhi rAjAdhISA rAja haMsa nayana rAjaSEKara vi rAjita kIrti gaja rAjavaradA rAja vadanA ripu rAjamastaka SUlA rAja rAjOttama rAjavinutA rajIvadoLagidda rAjIvana pAlisida rAja mArtAnDa dvijarAja gamanA rAja rAjaru ninna rAjisuva caraNa rAjIvadalli vAlaga mALparU rAja rAjAgragaNya rAjABiShEkakke rAja nInallade rAjarunTE rAjagaMBIra aparAjitanAm…