Haridasa Sahitya — Vyasadasa
Sri pathiyu namage
ಶ್ರೀಪತಿಯು ನಮಗೆ ಸಂಪದವೀಯಲಿ
Composer: Purandara Dasaru · Deity: Hari · Genre: Philosophy
Kannada lyrics
ಶ್ರೀಪತಿಯು ನಮಗೆ ಸಂಪದವೀಯಲಿ|| ವಾಣೀ ಪತಿಯು ನಮಗೆ ದೀರ್ಘಾಯು ಕೊಡಲಿ||a.pa|| ಸುರರ ಗಣವನು ಪೊರೆಯೆ ವಿಶವ ಕಂಠದಲಿಟ್ಟ ಹರ ನಮಗೆ ಸತತ ಸಹಾಯಕನಾಗಲಿ| ನರರೋಳುನ್ನತವಾದ ಭೋಗ ಭಾಗ್ಯಂಗಳನು ಪುರುಹೂತ ಪೂರ್ಣ ಮಾಡಿಸಲಿ ನಮಗೆ||1|| ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಲೆಲ್ಲ ನೆರವೇರಿಸಲಿ| ದಿನದಿನದಿ ಅಶ್ವಿನಿಗಳಾಪತ್ತುಗಳ ಕಳೆದು ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ||2|| ನಿರುತ ಸುಜ್ಞಾನವನು ಈವ ಗುರು ಮಧ್ವರಾಯ ಗುರುಗಳಾಶಿರ್ವಾದ ನಮಗಾಗಲಿ| ಪುರಂದರ ವಿಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ||3||
Transliteration
sri pathiyu namage sampathaveeyali vaani pathiyu namage dheergayu kodali|| vara vibutharanu poreya vishava kandadhalalitta hara nithya namage sahaayavagali nararolu unnathavatha nithya boggalannu puruhuta poorna madisi namage||1|| vinutha siddhi prathanu vignesa dayadhindha nenatha kaaryagalella neraverisalu dina dinadhi dhanvanthri abatthugala kaledhu manage harusha vitthu mannisali bidadhe||2||…