Haridasa Sahitya — Vyasadasa
Sri Parvathi devi sthothra sulaadhi
ಧೃವತಾಳ
Composer: Pranesha Dasaru · Deity: Gouri / Parvati Devi · Genre: Dasara Pada
Kannada lyrics
ಧೃವತಾಳ ಉಮಾ ಕಾತ್ಯಾಯಿನಿ ಪಾವ೯ತಿ ಕಲ್ಯಾಣಿ| ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ | ಕಮ್ಮಗೋಲನ ಜನನಿ ದಾಕ್ಷಾಯಿಣಿ | ಸುಮನಸರಿಗೆ ಗತಿ ಕರುಣಾಪೂರಿತ ಪಾಂಗೆ| ಕುಮನಸರಿಗತಿ ವಜ್ರ ಕಠಿಣ ಪಾಂಗೆ | ರಮೆಯರಸನ ಪಾದಸುಮನಸ್ವ ಭೃಂಗೆ | ಬೊಮ್ಮಭಿನವ ಪ್ರಾಣೇಶ ವಿಠಲನ | ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ ಮಟ್ಟತಾಳ ಚಂಡಿದುರ್ಗೆ ಭೂತಗಣ ಸಂಸೇವಿತಳೆ | ರುಂಡಾಹಿ ಮಾಲಾಧರ ಹೃನ್ಮಂದಿರಳೆ | ಉಂಡು ವಿಷವ ನಿನ್ನ ಗಂಡನು ಬಳಲಿ | ಕೈಕೊಂಡೌಷಧವೆನಗೆ ಕರುಣದಿ ನೀಡಮ್ಮ ಮಂಡೆ ಬಾಗಿ ಬೇಡ್ವೆ | ಕರಗಳ ಜೋಡಿಸುತ | ಪುಂಡರೀಕ ನಯನೆ ಪುಂಡರೀಕ ಗಮನೆ | ಪಂಢರ ಅಭಿನವ ಪ್ರಾಣೇಶ ವಿಠಲನ | ಪುಂಡರೀಕ ಚರಣ ಬಂಡುಣಿ ಎನಿಸಮ್ಮಾ|| ತ್ರಿವಿಡಿತಾಳ ಆರ…
Transliteration
dhruvatala Uma katyayini pava9ti kalyani| bomma brukuti sambuta devana rani | kammagolana janani dakshayini | sumanasarige gati karunapurita pange| kumanasarigati vajra kathina pange | rameyarasana padasumanasva brunge | bommabinava pranesa vithalana | sumana caranagalalli manava prerisu taye Mattatala Chandidurge butagana samsevitale | rundahi maladhara hrunmandirale | undu vishava ninna gandanu…