Haridasa Sahitya — Vyasadasa
Sri narasimha devara suladi
ನರಸಿಂಹ ಸುಳಾದಿ
Composer: Vijaya Dasaru · Deity: Narasimha · Genre: Sulaadi
Kannada lyrics
ರಾಗ – ನಾಟಿ ತಾಳ – ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಬೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಅ- ಘೋರ ದುರಿತ ಸಂಹಾರ ಮಾಯಾಕಾರ ಕ್ರೂರದೈತ್ಯರ ಶೋಕ ಕಾರಣ ಉದುಭವ ಈರೇಳು ಭುವನ ಸಾಗರದೊಡೆಯ ಅರೌದ್ರನಾಮಕ ವಿಜಯ ವಿಠ್ಠಲ ನರಸಿಂಗ ವೀರರ ಸಾತುಂಗ ಕಾರುಣ್ಯಪಾಂಗ || ೧ || ತಾಳ – ಮಟ್ಟ ಮಗುವನು ರಕ್ಕಸನು ಹಗಲಿರುಳು ಬಿಡದೆ ಹಗೆಯಿಂದಲಿ ಹೊಯ್ದು ನಗಪನ್ನಗ ವನಧಿ ಗಗನ ಮಿಗಿಲಾದ ಅಗಣಿತ ಬಾಧಿಯಲಿ ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು ಹೇ ಜಗದ ವಲ್ಲಭನೇ ಸುಗುಣಾನಾದಿಗನೆ ನಿಗಮಾ ವಂದಿದತೆ ಪೊಗಳಿದ ಭಕುತರ ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು…
Transliteration
Raga-kalyana dhruvatala Vira simhane narasimhane daya para | Varane Baya nivarana nirguna | Saridavara samsara vrukshada mula | Berarisi kiluva biridu Bayankara | Goravatara karalavadana a | Gora durita samhara mayakara | Kruradaityara soka karana udubava | Irelu Buvana sagaradodeya | Araudranamaka vijaya viththala narasinga | Virarasatunga karunyapanga || 1 || -mattatala- Maguvina rakkasanu hagal…