Haridasa Sahitya — Vyasadasa

Sri man madhwa matha mahima sulaadhi

ಆದಿತಾಳ

Composer: Vijaya Dasaru · Deity: Sri Madhwacharyaru · Genre: Sulaadi

Kannada lyrics

ಆದಿತಾಳ ಮಧ್ವಮತದ ಭಾಗ್ಯ ಎಂಥದೊ ಎಂಥದೊ ದುಗ್ಧಾಬ್ಧಿಯಂತೆ ಪ್ರಕಾಶವಾಗಿ ದಿಗ್ದೇಶದೊಳು ತುಂಬಿ ಸೂಸುತಲಿದೆ ಇದೇ ಬದ್ಧಗೈಸುವ ಶಕ್ತಿ ಮೊದಲೇ ಇಲ್ಲ ಪೊದ್ದಿಕೊಂಡು ಬಂದು ಹೊದರಿನೊಳಗೆ ಅಡ ಗಿದ್ದಾಗಿ ತರುವಾಯಾ ಇದೆ ನಾಮದ ಇದ್ದ ಶಕುನಿ ವ್ಯರ್ಥ ದೂಷಿಸಲೇನಹುದೊ ಹೃದರೋಗವಲ್ಲದೆ ಅದರಂತೆವೋ ಮಧ್ವರಾಯರ ಮತದ ಭಾಗ್ಯವೇ ಸೌಭಾಗ್ಯ ನಿದ್ರೆಯೊಳಗಾದರು ಎಚ್ಚೆತ್ತು ನೋಡಿದರು ಉದ್ರೇಕ ಆನಂದ ಮುಂದೆ ವರ್ಣಿಸಲರಿಯೇ ಶುದ್ಧಾತುಮರ ಕೇಳಿ ಬಲ್ಲರು ಈ ಪರಿ ಸಾ ನಿಧ್ಯವಾಗಿದ್ದ ಜನರ ಪುಣ್ಯವೆಂತೊ ಮಧ್ವವಲ್ಲಭ ನಮ್ಮ ವಿಜಯವಿಠಲನಲ್ಲಿ ಇದ್ದ ಸೊಬಗುನೋಡಿ ಆನಂದತೀರ್ಥರಿಂದ || ೧ || ಮಟ್ಟತಾಳ ತತ್ವವಿಚಾರವನು ತಿಳಿದ ಮನುಜ ಮನುಜಾ ಉತ್ತುಮ ಉತ್ತುಮನು…

Transliteration

Adi tala – Madhvamatada bagya enthadho enthadho Dugdhabdhiyante prakasavagi Digdesadolu tumbi susutalide ide Baddhagaisuva Sakti modale illa Poddikondu bandu hodarinolage ada Giddagi taruvaya ide namada Idda Sakuni vyartha dushisalenahudo Hrudarogavallade adarantevo Madhvarayara matada bagyave saubagya Nidreyolagadaru eccettu nodidaru Udreka Ananda munde varnisalariye Suddhatumara keli ballaru I p…