Haridasa Sahitya — Vyasadasa
Sravana Shanivaara haadu
ವಣ ಶನಿವಾರ ಗೌರೀ
Composer: Harapanahalli Bheemavvanavaru · Deity: Lakshmi Devi · Genre: Aarathi
Kannada lyrics
ವಣ ಶನಿವಾರ ಗೌರೀ ಹಾಡು ಗಜವದನನ ಪಾದಾಂಬುಜಗಳಿಗೆರಗುವೆನು ಅಜನರಸಿಗೆ ನಮಸ್ಕರಿಸಿ ತ್ರಿಜಗವಂದಿತ ಲಕ್ಷ್ಮೀನಾರಾಯಣ ಸ್ವಾಮಿ ನಿಜಪತ್ನಿ ಕತೆಯ ವರ್ಣಿಸುವೆ ಅರಸನಾಶ್ರಯವ ಮಾಡೊಂದು ಪಟ್ಟಣದಲ್ಲಿ ಇರುತ್ತಿದ್ದ ಸೋಮೇಶಭಟ್ಟ ಹರುಷದಿಂದಲಿ ಸೊಸೆಯರು ಗಂಡುಮಕ್ಕಳು ಭರಿತವಾದರು ಸುಖದಿಂದ ಆ ಮಹಾಕ್ಷೀರಸಾಗರದಲ್ಲಿ ಜನಿಸಿದ ಶ್ರೀಮಹಾಲಕ್ಷ್ಮಿದೇವೇರ ನೇಮದಿಂದಿಟ್ಟು ನಿಷ್ಠೆಯಲಿ ಸೋಮೇಜಮ್ಮ ತಾ ಮಹಾ ಸಂಭ್ರಮದಿಂದ ಸಾದು ಪರಿಮಳ ಅರಿಷಿಣ ಗಂಧ ಕುಂಕುಮ ಕ್ಯಾದಿಗೆ ಕುಸುಮ ಮಲ್ಲಿಗೆಯ ಮಾಧವನರಸಿ ಮಾಲಕ್ಷ್ಮಿಗರ್ಪಿಸಿ ಮಂಗಳಾರತಿಯನ್ನು ಬೆಳಗುವೋರು ಎಣ್ಣೋರಿಗೆ ತುಪ ಸಣ್ಣ ಶ್ಯಾವಿಗೆ ಪರಮಾನ್ನ ಶಾಲ್ಯಾನ್ನ ಸೂಪಗಳು ಚೆನ್ನವಾಗಿದ್ದ ತಾಂಬೂಲವನರ್ಪ…
Transliteration
gajavadanana pAdAMbujagaLigeraguvenu ajanarasige namaskarisi trijagavandita lakShmInArAyaNa svAmi nijapatni kateya varNisuve arasanASrayava mADondu paTTaNadalli iruttidda sOmESaBaTTa haruShadindali soseyaru ganDumakkaLu BaritavAdaru suKadinda A mahAkShIrasAgaradalli janisida SrImahAlakShmidEvEra nEmadindiTTu niShTheyali sOmEjamma tA mahA saMBramadinda sAdu parimaLa ariShiNa gandha kuMkuma kyAdige…