Haridasa Sahitya — Vyasadasa

Sravana aidu sukravara haadu

ಶ್ರಾವಣ ಶುಕ್ರವಾರ ಹಾಡು

Composer: Harapanahalli Bheemavvanavaru · Deity: Lakshmi Devi · Genre: Aarathi

Kannada lyrics

ಶ್ರಾವಣ ಶುಕ್ರವಾರ ಹಾಡು ಹರನ ಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತೆಯ ಕಥೆಗೆ ವರವ ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ ಇಕ್ಷುಚಾಪದವನ ಪಡೆದ ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ- ಕಟಾಕ್ಷದಿ ನೋಡಬೇಕೆನ್ನ ಶ್ರಾವಣಮಾಸದಿ ಮೊದಲ ಶುಕ್ಕುರವಾರ ಮಾಧವನರಸಿ ಮಾಲಕ್ಷ್ಮೀ ದೇವೇರ ಮಹಿಮೆ ಕೊಂಡಾಡುವೋದೀ ಕಥೆ ಕಿವಿಗೊಟ್ಟು ಕೇಳೋದು ಜನರು ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ ಹಸುಗೂಸುಗಳು ಮನೆತುಂಬಾ ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲ…

Transliteration

sAkShAta SrIhari vakShasthaLa vAsiyE ikShucApadavana paDeda mOkShadAyakaLE mA lakShumi karuNA- kaTAkShadi nODabEkenna SrAvaNamAsadi modala SukkuravAra mAdhavanarasi mAlakShmI dEvEra mahime konDADuvOdI kathe kivigoTTu kELOdu janaru baDava brAhmaNanondu paTTaNadoLagidda maDadi makkaLa sahitAgi hiDidu taMbUri taMbigeya gOpALakke biDadondu maneya tirugutali soseyaru nAlku mandiyu ganDumakkaLU hasugUsu…