Haridasa Sahitya — Vyasadasa

palisayya pavananayya

ಪಾಲಿಸಯ್ಯ ಪವನನಯ್ಯ

Composer: Gopala Dasaru · Deity: Srinivasa / Venkatesha · Genre: Bhakti

Kannada lyrics

ಪಾಲಿಸಯ್ಯ ಪವನನಯ್ಯ ಪಾಲವಾರಿಧಿಶಯ್ಯ, ವೇಂಕಟರಾಯಾ ॥ ಪ॥ ಕಾಲಕಾಲಕೆ ಹೃದಯಾಲಯದೊಳು ನಿನ್ನ ಶೀಲಮೂರುತಿ ತೋರೋ ಮೇಲು ಕರುಣದಿ ॥ ಅ. ಪ ॥ ಶ್ರೀಶ ಸಂಸಾರವೆಂಬ ಸೂಸುವ ಶರಧಿಯೊಳು ಈಸಲಾರೆನೊ ಹರಿಯೇ ಎನ್ನಯ ಧೊರೆಯೇ ದಾಸನೆಂತೆಂದಮ್ಯಾಲೆ ಘಾಸಿಗೊಳಿಸುವುದು ಲೇಸು ನಿನಗಲ್ಲವಯ್ಯ, ಹೇ ಜೀಯ್ಯ ದೋಷರಾಶಿಗಳೆಲ್ಲ ನಾಶಮಾಡಿ ವಿ – ಶೇಷಜ್ಞಾನಭಕ್ತಿವೈರಾಗ್ಯವನಿತ್ತು ಆಶೆಯ ಬಿಡಿಸೆನ್ನ ಮೀಸಲಮನಮಾಡಿ ನೀ ಸುಳಿವುದು ಶ್ರೀನಿವಾಸ ಕೃಪಾಳೋ ॥ 1 ॥ ಮೂರು ಗುಣಗಳಿಂದ ಮೂರು ತಾಪಗಳಿಂದ ಮೂರು ಅವಸ್ಥೆಯಿಂದ, ಮುಕುಂದ ಮೂರು ಐದರಿಂದ ಮೂರು ಏಳರಿಂದ ಮೂರಾರು ದಾರಿಕಾಣದೆ, ಮೂರಾದೆ ಮೂರು ಹಿಡಿಸಿ ಮ್ಯಾಲೆ ಮೂರೆರಡೋಡಿಸಿ ಮೂರು ಮೂರು ಭಕ್ತಿ ಮೂರು ಕಾಲ…

Transliteration

palisayya pavananayya palavaridhisayya, venkataraya॥ pa॥ kalakalake hrdayalayadolu ninna silamuruti toro melu karunadi॥ a. Pa srisa sansaravemba susuva saradhiyolu isalareno hariye ennaya doreye dasanentendamyale ghasigolisuvudu lesu ninagallavayya, he jiyya dosarasigalella nasamadi vi – sesajnanabhaktivairagyavanittu asaya bidisenna misalamanamadi ni sulivudu srinivasa krpalo॥ 1॥ muru gunagalinda…

Esoteric commentary

# Palisayya Pavananayya Palavaridhisayya, Venkataraya ## Summary of the Composition Sri Gopala Dasaru's *Palisayya Pavananayya Palavaridhisayya, Venkataraya* is a heartfelt prayer to Lord Srinivasa of Tirumala. The composer surrenders himself to the Lord, seeking protection, spiritual upliftment, and liberation from worldly bondage. ### 1. Constant Remembrance of the Lord The composer prays th