Haridasa Sahitya — Vyasadasa
Hariye idu sariye
ಹರಿಯೇ ಇದು ಸರಿಯೇ
Composer: Narahari Tīrtha · Deity: Hari · Genre: Bhakti
Kannada lyrics
ರಾಗ : ಕೇದಾರ ತಾಳ : ಆದಿ ಹರಿಯೇ ಇದು ಸರಿಯೇ ಚರಣಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ|| ಪತಿತನೆಂದು ಶ್ರೀಪತಿ ರಕ್ಷಿಸದಿರೆ ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ? ||೧|| ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ ಭಕ್ತವತ್ಸಲ ನಾಮ ವ್ಯರ್ಥವಾಗದೆ? ||೨|| ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ ನಗಧರ ಎನ್ನ ಬಿಡುವ ಬಗೆ ಏನಿದು? ||೩|| ಹೇಯ ಅಜಾಮಿಳನ ಕಾಯಲಿಲ್ಲೆ ಸ್ವ ಕೀಯನೆ ನಾ ಪರಕೀಯನೆ ನಿನಗೆ? ||೪|| ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು ನಂಟನೆ ನಿನಗೆ ಬಂಟ ನಾನಲ್ಲವೆ? ||೫|| ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ ಕೊಟ್ಟಳು ಅವಳೇನ ಬಿಟ್ಟದ್ದು ನಾನೇನ? ||೬|| ದೊರೆ ನಿನ್ನ ಮನಸಿಗೆ ಸರಿಬಂದಂತೆ ಮಾಡು ಮೊರೆಹೊಕ್ಕೆನು…
Transliteration
**Rāga:** Kēdāra **Tāḷa:** Ādi **Pallavi:** Hariyē idu sariyē Caraṇasēvakanaḷḷi karuṇe bārad yāke **1.** Patitanendu Śrīpati rakṣisadirē Vitatavāhude ninna patitapāvana kīrti? **2.** Śakta nīnāgiddū bhaktanupekṣise Bhaktavatsala nāma vyarthavāgade? **3.** Digilillade odḍa Bhṛguva pālise Nagadhara enna biḍuva bage ēnidu? **4.** Hēya Ajāmilana kāyalille sva- Kīyane nā parakīyane ninage? **5.** Uṇṭu…