Haridasa Sahitya — Vyasadasa

summanirabeku sujnani jagadolage

ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ

Composer: Mahipati Dasaru · Deity: Hari · Genre: Advice

Kannada lyrics

*** ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ||ಧ್ರುವ|| ಎಲ್ಲದೋರ್ವದು ಮರೆದು ಎಲ್ಲರೊಳಗಿಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳಗೆಲ್ಲ ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು ||೧|| ಬಲ್ಲತನವನು ನೀಡಿ ಬಲ್ಲನೆ ತಾನಾಗಿ ಬಲ್ಲರಿಯನೆಂಬುದು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಕೊಳ್ಳಬೇಕು ಸೊಲ್ಲಲ್ಹೇಳುವ ಸೊಬಗ ಬೀರದಿರಬೇಕು ||೨|| ಸೋಹ್ಯ ಸೂತ್ರವ ತಿಳಿದು ಬಾಹ್ಯರಂಜನಿ ಮರೆದು ದೇಹವಿದೇಹದಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸದ್ಗುರುವಾದ ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು ||೩|| ***

Transliteration

summanirabeku sujnani jagadolage hamsoham bhavada usirodiyadhange ||dhruva|| elladorvadu maredu ellarolagihadaridu ellarogalella tanagabeku ellarogalella tanagi ella tannalagagi bella savida mukanantagabeku ||1|| ballatanavanu nidi ballane tanagi ballariyanembudu idyadabeku ballariyadodalagiddanella tilakollabeku sollalheluva sobaga biradirabeku ||2|| sohya sutrava tilidu bahyaranjani maredu dehav…

English meaning

A wise person should remain silent and detached within this world, just like the breath that flows naturally with the feeling of "Hamsōham" (I am He). *(Chorus)* Forgetting that everything is perceived outside, realizing He resides within everyone, one should become everything to everyone. Being everything to everyone and having everything contained within oneself, one should remain like a mute p