Haridasa Sahitya — Vyasadasa
ayyo sakidenu chanda
ಅಯ್ಯೊ ಸಾಕಿದೇನು ಚಂದಾ
Composer: Sreedavitthala Dasaru · Deity: Hari · Genre: Philosophy
Kannada lyrics
ಅಯ್ಯೊ ಸಾಕಿದೇನು ಚಂದಾ ಮೈ ಸೋಕದಿರೆಲೋ ಮುಕುಂದ || pa|| ಗ೦ಡನುಳ್ಳ ನಿಜ ಗರತೀ ಒಡ- ಗೊಂಡು ಬದಿಗೆ ಕೈ ತರುತೀ ಬಲು ಪುಂಡಾಟಗಳ ನೀನೆಸಗುತೀ || 1 || ಹೆಚ್ಚು ನುಡಿಯದಿರು ನಂಟು ಕಂಡು ಹುಚ್ಚು ಮಾಡುವದುಂಟೂ ನಡೆ ಬಿಚ್ಚದಿರೆಲೊ ಮೊಲೆಗಂಟೂ || 2 || ಶ್ರೀದವಿಠಲ ಯದುರಾಯಾ ನಿನ್ನ ಪಾದಕೆರಗುವೆನಯ್ಯಾ ನಡು- ಬೀದಿಯೊಳಗೆ ಬಿಡು ಕೈಯ್ಯಾ || 3 ||
Transliteration
ayyō sākidēnu candā mai sōkadirelō mukunda || pa || gaṇḍanuḷḷa nija garatī oḍa- goṇḍu badige kai tarutī balu puṇḍāṭagaḷa nīnesagutī || 1 || heccu nuḍiyadiru naṇṭu kaṇḍu huccu māḍuvaduṇṭū naḍe biccadirelō molegaṇṭū || 2 || śrīdaviṭhala yadurāyā ninna pādakeraguvenayyā naḍu- bīdiyoḷage biḍu kaiyyā || 3 ||