Haridasa Sahitya — Vyasadasa

baruveyo rangayya manege

ಬರುವೆಯೋ ರಂಗಯ್ಯ ಮನೆಗೆ

Composer: Sreedavitthala Dasaru · Deity: Krishna / Govinda / Mukunda · Genre: Bhakti

Kannada lyrics

ರಾಗ : ನವರೋಜು ತಾಳ : ಮಿಶ್ರಛಾಪು ಬರುವೆಯೋ ರಂಗಯ್ಯ ಮನೆಗೆ ಬಾರೋ ಹೋಗುವ ।।ಪ॥ ಬುಗರಿ ಚಂಡುಗಳ ಕೊಡುವೆನು ಬಂದರೆ ಬಗೆ ಬಗೆ ಆಟವ ಕಲಿಸಿ ಒಲಿಸುವೆನು ।।೧।। ರಸ ರಸಾಯನಗಳುಣ್ಣಿಸುವೆ ಬಂದರೆ ಮುಸುಕಿನೊಳಗೆ ಬಚ್ಚಿಟ್ಟುಕೊಂಬುವೆನು ।।೨।। ಶ್ರೀದವಿಠ್ಠಲ ಬಂದರೆ ನಿನಗೆ ಸಾದರದಲಿ ಸವಿಮಾತನ್ಹೇಳುವೆನು ।।೩।।

Transliteration

baruveyō raṅgaiyya manege bārō hōguva ||pa|| bugari caṇḍugaḷa koḍuvenu bandare bage bage āṭava kalisi olisuvenu ||1|| rasa rasāyanagaḷuṇṇisuve bandare musukinoḷage bacciṭṭukoṁbuvenu ||2|| śrīdaviṭṭhala bandare ninage sādaradali savimātanhēḷuvenu ||3||