Haridasa Sahitya — Vyasadasa
ramacandra nine paliso sarojanabha
ರಾಮಚಂದ್ರ ನೀನೇ ಪಾಲಿಸೊ ಸರೋಜನಾಭ
Composer: Sreedavitthala Dasaru · Deity: Rama · Genre: Bhakti
Kannada lyrics
ರಾಮಚಂದ್ರ ನೀನೇ ಪಾಲಿಸೊ ಸರೋಜನಾಭ ಸಾಧುಸಂಗ ಶೀಘ್ರ ಕೊಡಿಸೋ || PA || ಎಷ್ಟು ದಿನ ಕಷ್ಟ ಪಡುವದೋ ಈ ಭವದೊಳು ಈಸಲಾರೆನಯ್ಯ ಹರಿಯೇ | ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ || 1 || ಹರಿಹರರು ಸಮಾನರೆನ್ನದಾ ಈ ಸಜ್ಜನರಾ- ಸಂಗದಿಂದ ಹೀನ ನಾನಾದೆ | ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ || 2 || ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ ಒಂದು ದಿನ ಮಾಡಲಿಲ್ಲವೋ | ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ || 3 || ನಿತ್ಯದಲ್ಲಿ ವಿ…
Transliteration
ramacandra nine paliso sarojanabha sadhusanga sighrakodiso || PA || estu dina kastapaduvado i bhavadolu isalarenayya hariye | istu dina iddante iralarenendu karava mutti mugidu bedikombe murari krsna nine kayo || 1 || harihararu samanarennada i sajjanara- sangadinda hina nanade | innumyale illavayya srstigadhika srinivasa innu ninna smaraneyinda iruvenayya mukunda || 2 || prthviyalli puttida modal…