Haridasa Sahitya — Vyasadasa
sakayya saku sakayya
ಸಾಕಯ್ಯ ಸಾಕು ಸಾಕಯ್ಯ
Composer: Sreedavitthala Dasaru · Deity: Hari · Genre: Philosophy
Kannada lyrics
ಸಾಕಯ್ಯ ಸಾಕು ಸಾಕಯ್ಯ ನಮ- ಗ್ಯಾಕಯ್ಯ ಇನ್ನವಿವೇಕ ಸಂಗತಿ ||ಪ|| ಬುದ್ಧಿ ಶೂನ್ಯರಿಗೆ ಬುದ್ಧಿಯನು ಹೇಳಲು ಮದ್ದಾನೆ ಮೈತೊಳೆವಂತಾಯಿತು ||೧|| ದುರುಳ ಜನರಿಗೆ ಧರ್ಮವನರುಹಲು ಕುರುಡಗೆ ಕನ್ನಡಿ ತೋರಿದಂತಾದಿತು ||೨|| ಶ್ರೀದವಿಠಲನೆಂದಜ್ಞಾನಿಗೆ ಬೋಧಿಸೆ ಬೋರ್ಗಲ್ಲ ಮುಂದೆ ವದರಿದಂತಾಯಿತು ||೩||
Transliteration
sākayya sāku sākayya nama- gyākayya innavivēka saṅgati ||pa|| buddhi śūnyarige buddhiyanu hēḷalu maddāne maitoḷevantāyitu ||1|| duruḷa janarige dharmavanuruhalu kuruḍage kannaḍi tōrisidantāyitu ||2|| śrīdaviṭhalanendajñānige bōdhise bōrgalla munde vadaridantāyitu ||3||