Haridasa Sahitya — Vyasadasa

koḷalanood0 innomme rangayya

ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ

Composer: Sreedavitthala Dasaru · Deity: Krishna / Govinda / Mukunda · Genre: Bhakti

Kannada lyrics

ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ ಕೊಳಲನೂದೋ ಇನ್ನೊಮ್ಮೆ ಕೃಷ್ಣಯ್ಯಾ ||ಪ|| ಕೊಳಲನೂದೋ ದ್ವಾರಕಾ ಪುರನಿಲಯಾ |ಅ.ಪ.|| ಎಡಹೆಗಲಲ್ಲೆಡಗಲ್ಲಂವ ನೀಡೀ ಕುಡಿ ಹುಬ್ಬುಗಳಲ್ಲಾಡಿಸುತ್ತ ||1|| ಮೃದುತರ ತುದಿ ಬೆರಳಿಂದೊತ್ತುತ ಮಧುರಾಧರದಲ್ಲಿಟ್ಟು ರಂಗಯ್ಯ|2|| ನಾದ ಮೂರುತಿ ಗೋಪೀಜನಲೋಲಾ ಶ್ರೀದವಿಠಲ ಗೋಪಾಲಬಾಲ ||3||

Transliteration

koḷalanūdō innomme raṅgaiyyā koḷalanūdō innomme kṛṣṇaiyyā || pa || koḷalanūdō dvārakā puranilayā || a.pa.|| eḍahegalalledagallaṁva nīḍī kuḍi hubbugaḷallāḍisutta ||1|| mṛdutara tudi beraḷindottuta madhurādharadalliṭṭu raṅgaiyya ||2|| nāda mūruti gōpījanalōlā śrīdaviṭhala gōpālabāla ||3||