Haridasa Sahitya — Vyasadasa

Rangayya ranga baro

ರಂಗಯ್ಯ ರಂಗ ಬಾರೋ

Composer: Sreedavitthala Dasaru · Deity: Krishna / Govinda / Mukunda · Genre: Bhakti

Kannada lyrics

ರಂಗಯ್ಯ ರಂಗ ಬಾರೋ ಬರುತೀಯ ನಮ್ಮನಿಗೆ ಬಾರೋ || ಪ || ಬಂದರೆ ಬುಗುರೀ ಚಂಡುಗಳನೆ ಕೊಟ್ಟು ಬಗೆ ಬಗೆ ಆಟವ ಕಲಿಸಿ ವಲಿಸುವೇ ||1|| ಬಂದರೆ ರಸಾ ರಸಾಯನಗಳನುಣಿಸೀ ಮುಸುಕಿನೊಳಗೆ ಬಚ್ಚಿಟ್ಟುಕೊಂಬೆನು ಬಾರೊ ||2|| ಬಂದರೆ ಶ್ರೀದವಿಠ್ಠಲ ನಿನಗೇ ಸುಂದರೆ ಸವಿಮಾತಾ ಹೇಳುವೆನೊಂದು ||3||

Transliteration

raṅgaiyya raṅga bārō barutīya nammanige bārō || pa || bandare bugu rī caṇḍugaḷane koṭṭu bage bage āṭava kalisi valisuvē || 1 || bandare rasā rasāyanagaḷanuṇisī musukinoḷage bacciṭṭukoṁbenu bāro || 2 || bandare śrīdaviṭṭhala ninagē sundare savimātā hēḷuvenondu || 3 ||