Haridasa Sahitya — Vyasadasa

śrī jagannāthadāsa namipe

ಶ್ರೀ ಜಗನ್ನಾಥದಾಸ ನಮಿಪೆ

Composer: Sreedavitthala Dasaru · Deity: Sri Jagannatha Dasaru · Genre: Bhakti

Kannada lyrics

ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ||pa|| ಈ ಜಗದೊಳು ನಿಮಗೆಣೆಗಾಣೆ ಸತತ ನಿ – ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ||a.pa|| ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ ||1|| ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ…

Transliteration

śrī jagannāthadāsa namipe gururāja sātvikavapuṣ ||pa|| ī jagadoḷu nimageṇegāṇe satata ni – vr yājadi hariya guṇōpāsane māḷpa ||a.pa|| haridāsa kulavaryarenisi kalpataruvandadi carya carisuta dhareyoḷu mereva mahātmar caraṇēndrīvarayugma daruśana māḷpara duritarāśigaḷiragoḍade nere paramamuktiya dāri tōruta sir isahita hari tōruvandadi karuṇa māḷpa sugaṇamahōdadhi ||1|| raviyu sañcarisuvante bhūval…