Haridasa Sahitya — Vyasadasa
sangasukhava bayasi badukiro
ಸಂಗಸುಖವ ಬಯಸಿ ಬದುಕಿರೋ ಸುಜನರೆಲ್ಲ
Composer: Sreedavitthala Dasaru · Deity: Sri Jagannatha Dasaru · Genre: Bhakti
Kannada lyrics
ಸಂಗಸುಖವ ಬಯಸಿ ಬದುಕಿರೋ ಸುಜನರೆಲ್ಲ ರಂಗವಲಿದ ದಾಸರಾಯರ ॥ ಪ ॥ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದಲಿ ಕಾಣುತಿಹರ ॥ ಅ.ಪ.॥ ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು ಕೃಷ್ಣನ ಕೀರ್ತನೆಯನು ಪಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಕಾಮ್ಯಕರ್ಮ ಬಿಟ್ಟು ಭಕ್ತಿಯನ್ನೆ ಮಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ॥ 1 ॥ ಭೂತದಯಾಶೀಲರಾದನೀತ ಗುರುದ್ವಾರ ಜಗ - ನ್ನಾಥ ವಿಠಲಾಂಕಿತವನು ಪ್ರೀತಿಯಿಂದ ಪಡೆದು ಸಂ - ಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ - ಮಾತಿಶಯದಿ ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನ…
Transliteration
saṅgasukhava bayasi badukirō sujanarella raṅgavalida dāsarāyara ॥ pa ॥ saṅgasukhava bayasi baduki bhaṅgapaḍipa bhavava nūki hiṅgadē narasiṅganannu kaṅgaḷindali kāṇutihara ॥ a.pa.॥ puṭṭidārabhya parama vaiṣṇavādhyakṣarenisi śiṣṭa sadācāradalli niṣṭharāgi nitya muddu kṛṣṇana kīrtaneyanu pāḍuta madhvamatava puṣṭigaisi khaḷara kāḍuta kāmyakarma biṭṭu bhaktiyanne māḍuta banda lābha naṣṭa tuṣṭigaḷige oḍ…