Haridasa Sahitya — Vyasadasa

Rajara bhagyavidu

ರಾಜರ ಭಾಗ್ಯವಿದೂ

Composer: Sreedavitthala Dasaru · Deity: Vadirajaru · Genre: Bhakti

Kannada lyrics

ರಾಜರ ಭಾಗ್ಯವಿದೂ ಸೋದೆ ರಾಜರ ಭಾಗ್ಯವಿದು|| ಸೋಜಿಗವೆನಿಸಿ ವಿರಾಜಿಸುತಿದಕೋ||ಅಪ|| ಬುಧಜನಕೊಪ್ಪುವ ಪದಸುಳಾದಿಗಳ ಎದುರದೆ ಬಿಚ್ಚಿಸುವ ಚತುರತೆಯೂ|| ಸದಮಲ ನಾನಾ ವಿಧ ಗ್ರಂಥದಿ ಹಯವದನನ ಪೂಜಿಸುವುದೆಲ್ಲಾ ||೧|| ತಮ್ಮಯನೇಮವು ಒಮ್ಮೆಗೆ ಬಿಡದಲೆ ಸಮ್ಮಯ ಬಿಡದಲೆ ಸಮ್ಮೊಗದಾ|| ಹಮ್ಮಹತಾಸಖಿ ಬೊಮ್ಮಭೂತವನು ಗಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ ||೨|| ಮೇದಿನಿಯೊಳಗೆ ಶುಭೋದಯಕಾರಕ ಸ್ವಾದೀಸ್ಥಳವು ಸರ್ವಾಧಿಕವೈ|| ಪಾದದ್ವಯದ ಅಗಾಧ ಮಹಿಮೆಯನ್ನು ಶ್ರೀದವಿಠಲನಾರಾಧನೆಯಲ್ಲದೆ ||೩||

Transliteration

Rajara bhagyavidu sode rajara bhagyavidu|| sojigavenisi virajisutidako||apa|| budhajanakoppuva padasuladigala edurade biccisuva caturateyu|| sadamala nana vidha granthadi hayavadanana pujisuvudella ||1|| tam’mayanemavu om’mege bidadale sam’maya bidadale sam’mogada|| ham’mahatasakhi bom’mabhutavanu gam’mane nirmisi ram’mipudella ||2|| mediniyolage subhodayakaraka svadisthalavu sarvadhikavai|| padad…