Haridasa Sahitya — Vyasadasa
sangasukhava bayasi badukiro
ಸಂಗಸುಖವ ಬಯಸಿ ಬದುಕಿರೋ
Composer: Sreedavitthala Dasaru · Deity: Hari · Genre: Advice
Kannada lyrics
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ || ಪ|| ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ||ಅ.ಪ.|| ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ||1|| ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾ…
Transliteration
Saṅgasukhava bayasi badukirō raṅgavalida bhāgavatara || pa|| saṅgasukhava bayasi baduki bhaṅgapaḍipa bhavava nūki hiṅgadē narasiṅganannu kaṅgaḷinda kāṇutihara ||a.Pa.|| Puṭṭidārabhya parama vaiṣṇavādhyakṣarenisi śiṣṭa sadācāradalli niṣṭharāgi nitya muddu kr̥ṣṇa kīrtaneyanu pāḍuta kāvyakarma biṭṭu bhaktiyane māḍuta madhvamatava puṣṭigaisi khaḷara kāḍuta banda lābha naṣṭa tuṣṭigaḷige oḍambaṭṭa bagey…