Haridasa Sahitya — Vyasadasa
Gopi kele ninna maga
ಗೋಪಿ ಕೇಳ್ ನಿನ್ನ ಮಗ
Composer: Sreedavitthala Dasaru · Deity: Krishna / Govinda / Mukunda · Genre: Bhakti
Kannada lyrics
ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕಾ ಬಂದಾ ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ ಮಾರನ ಪಿತ ತಾ ಮನೆಯೊಳು ಪೊಕ್ಕ ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 1 || ಹರೆಯದ ಪೋರಿ ಜಗದ ಕಣ್ಗೋರಿ(?) ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 2 || ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ ಗೋಪಾಲನ ಮನಸ್ಸೊಮ್ಮೆ ಹಾಂಗೆ ಒಮ್ಮೆ ಹೀಂಗೆ || 3 || ರಾಧೆಯ ಮನದ ಮೋದ ಮುಕುಂದ ಶ್ರೀದವಿಠಲನಾಟ ಚೆಂದ ನಯನಾನಂದ ಆನಂದ || 4 ||
Transliteration
Gopi kele ninna maga jaara chora sukumara|| Mudhadh mukundha sadhanakke banda dhathiya meesalu benne thindha ninna kandha … anandha ||1|| maranna pithana maneyolu pokka hidiya podhare kaige sikka nodi nakka … paari takka ||2|| baaladhina vaithu helu vadh yange gopala manasomme haange omme heenge bicchi helali hyaange||2|| raadheya manadha modha mukundha namma sridha vittalana naata chandha aada ch…