Haridasa Sahitya — Vyasadasa

bharavasavillenenge

ಭರವಸೆಯಿಲ್ಲೆನಗೆ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಕರುಣಾಕರ ನೀನೆಂಬುವದೇತಕೋ ಭರವಸೆಯಿಲ್ಲೆನಗೆ ||ಪ|| ಪರಿಪರಿಯಲಿ ಈ ಜನ್ಮವನಿತ್ತು ತಿರುಗಿ ತಿರುಗಿ ಮನ ಕರಗಿಸುವುದ ಕಂಡು || ಕರಿಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ಭವದಲ್ಲಿ ನೀನಂತೆ ಅರಿತು ವಿಚಾರಿಸಿ ನೋಡಲದೆಲ್ಲವು ಪರಿಪರಿ ಕಂತೆಗಳಂತಿದೆ ಕೃಷ್ಣ || ಕರುಣಾಕರ ನೀನಾದರೆ ಈಗಲೆ ಕರಪಿಡಿದೆನ್ನನು ಹರಿ ಕಾಯೊ ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಪೀಡಿಪುದುಂಟೆ || ಮರಣಕಾಲದಲಿ ಅಜಮಿಳಗೊಲಿದೆ ಗರುಡಧ್ವಜನೆಂಬ ಬಿರುದಿನಿಂದ ವರಬಿರುದುಗಳು ಉಳಿಯಬೇಕಾದರೆ ತ್ವರಿತದಿ ಕಾಯೋ ಪುರಂದರವಿಠಲ ||

Transliteration

pallavi karuNAkara nInembuvudyAtako bharavasavillenenge anupallavi paripariyali I nara janmavanittu tirugi tirugi mana karagisuvuda kaNDu caraNam 1 kari dhruva bali pANcAla ahalyeya poradava nInante aridu vicArisi nODaladellavu paripari kandegaLantide krSNa caraNam 2 karuNAkara nInAdare Igale kara piDidennanu hari kAyO sarasijAkSaNe sarasa nInAdare duritagaLennanu biDivuduNTe caraNam 3 maraNa kAla…