Haridasa Sahitya — Vyasadasa

Dinagalanu kaleva janare sujanaru

ದಿನಗಳನು ಕಳೆವ ಜನರೆ ಸುಜನರು

Composer: Vadirajaru · Deity: Hari · Genre: Advice

Kannada lyrics

ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ಶ್ರೀ ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ…

Transliteration

Pallavi Dinagaḷanu kaḷeva janare sujanaru | vanajanābhana dāsara samāgamadinda || Charaṇa 1 Aruṇōdayadale ddu āchamana kr̥tiyinda | pariśud'dharāgi ihaparagaḷinda | eraḍuvidha sukhavīva gurumadhvamunivarana | paramamataviḍidu harikathāmr̥ta savidu || Charaṇa 2 Snānavanu māḍi saṅkalpapūrvakadi san- | dhyāna gāyitri guru mantra japavu | bhānunāmakanāda paramātmanāṅghriyanu | dhyānavanu māḍi adhyayan…

English meaning

Composed by Shri Vadiraja Tirtha, this song is a comprehensive "daily code of conduct" (Dinachari) for a seeker. It outlines how a true devotee of the Lord should spend every moment from dawn until dusk in spiritual awareness. Summary The song emphasizes that "good people" (Sujanaru) are those who spend their days in the company of the Lord's devotees. It provides a step-by-step guide to a disci