Haridasa Sahitya — Vyasadasa

Nee Dayaparano

ನೀ ದಯಾಪರನೊ

Composer: Purandara Dasaru · Deity: Hari · Genre: Bhakti

Kannada lyrics

ನೀ ದಯಾಪರನೊ ನಿನ್ನವರ ಸಾಧನವೊ ॥ ಪ ॥ ಮುದ್ದು ಹಯವದನ ಸುಖಸದನ ಪೇಳಿದನ ॥ ಅ ಪ॥ ಮದಕರಿಯು ಸರಸಿಯೊಳು ಮಕರಿಬಾಧೆಗೆ ಸಿಲುಕಿ । ಪದುಮೇಶ ಪದುಮಾಕ್ಷ ಪದುಮನಾಭ ॥ ಪದುಮಸಂಭವ ಜನಕ ಪಾಹಿಪಾಹಿ ಎನಲು । ಒದಗಿ ಪಾಲಿಸಿದೆ ತವ ದಯವೋ ಸಾಧನವೊ ॥ 1 ॥ ಅಂತ್ಯಜಳ ಸಹವಾಸದಿ ವಿಪ್ರವರನೊಬ್ಬ । ಸಂತೋಷದಿಂದ ಬಹುಕಾಲ ಕಳೆದು ॥ ಅಂತ್ಯಕಾಲಕೆ ತನ್ನ ಮಗನ ಕರೆಯಲು ಕಾಯ್ದೆ । ಕಂತುಜನಕ ನಿನ್ನ ದಯವೋ ಸಾಧನವೊ ॥ 2 ॥ ಅವರವರ ಯೋಗ್ಯತೆಯನರಿತು ಪ್ರೇರಕನಾಗಿ । ಅವರಿಂದ ನುಡಿಸಿ ಅವರ ನುಡಿಗಳಿಗೆ ಹಿಗ್ಗಿ ॥ ಅವರಿಗೊಲಿವೆ ನಮ್ಮ ಪುರಂದರವಿಠ್ಠಲ । ಅವನೀಶ ನಿನ್ನ ದಯವೊ ಸಾಧನವೊ ॥ 3 ॥

Transliteration

Nī dayāparano ninnavara sādhanavo || Pa || Muddu hayavadana sukhasadana pēḷidana || A Pa || Madakariyu sarasiyoḷu makaribādhege siluki | Padumēśa padumākṣa padumanābha | Padumasambhava janaka pāhipāhi enalu | Odagī pāliside tava dayavō sādhanavo || 1 || Antyajaḷa sahavāsadi vipravaranobba | Santōṣadinda bahukāla kaḷedu | Antyakālake tanna magana kareyalu kāyde | Kantujanaka ninna dayavō sādhanavo…

Esoteric commentary

# Dayāparanō Sādhanapriyanō – Meaning & Explanation This profound composition by **Sri Purandara Dasa** explores a timeless spiritual question: **Is a devotee saved by God's boundless grace (Daya), or by the devotee's own spiritual effort (Saadhana)?** Through powerful examples from scripture, Purandara Dasa ultimately reveals that even the impulse to perform spiritual effort comes from God. He