Haridasa Sahitya — Vyasadasa

yaarige yaruntu

ಯಾರಿಗೆ ಯಾರುಂಟು

Composer: Purandara Dasaru · Deity: Hari · Genre: Vairagya

Kannada lyrics

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ || ಬಾಯಾರಿತು ಎಂದು ಬಾವಿನೀರಿಗೆ ಪೋದೆ ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ || ೧ || ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ || ೨ || ಅಡವಿಯೊಳ್ಮನೆ ಮಾಡಿ ಗಿಡಕೆ ತೊಟ್ಟಿಲು ಕಟ್ಟಿ ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ || ೩ || ತಂದೆ ಶ್ರೀ ಪುರಂದರವಿಠಲ ನಾರಾಯಣ ನಾ ಸಾಯೋ ಹೊತ್ತಿಗೆ ನೀ ಕಾಯೋ ಹರಿಯೆ || ೪ ||

Transliteration

yArige yarunTu eravina samsAra | nIra mElaNa guLLe nijavalla hariye || bAyAritu endu bAvi nIrige pOde bAvili jalabatti baridAitu hariye || bisilu gALigAgi marada neraLige pOde mara baggi shirada mEloragitu hariye || yArige ... || yArige yarunTu eravina samsAra || aDaviyoL mane mADi giDake toTTila kaTTe toTTilina shishu mAyavAyitu hariye || tande shrI purandara viTThala nArAyaNa nA sAyo hottige nI…