Haridasa Sahitya — Vyasadasa

Jaarara sangadinda

ಜಾರರ ಸಂಗದಿಂದ

Composer: Vyasarajaru · Deity: Krishna / Govinda / Mukunda · Genre: Bhakti

Kannada lyrics

ಜಾರರ ಸಂಗದಿಂದ ಬಂದ ಪಾತಕಕೆ ಗೋಪಿ ಜಾರನೆಂದರೆ ಸಾಲದೆ? ಚೋರರ ಸಂಗದಿಂದ ಬಂದ ಪಾತಕಕೆ ನವನೀತ ಚೋರನೆಂದರೆ ಸಾಲದೆ? ಹಿಂಸಕರ ಸಂಗದಿಂದ ಬಂದ ಪಾತಕಕೆ ಕಂಸ ಹಿಂಸಕನೆಂದರೆ ಸಾಲದೆ? ಜಾರನೆಯು ಚೋರನೆಯು ಹಿಂಸಕಾರನೆಯು ನಾ ನೆನೆಯಲು ನಮೋ ನಮೋ ನಮೋ ಶ್ರೀ ಕೃಷ್ಣ ॥

Transliteration

Jārara saṅgadinda banda pātakake Gōpi jāranendare sālade? Chōrara saṅgadinda banda pātakake Navanīta chōranendare sālade? Hiṁsakara saṅgadinda banda pātakake Kaṁsa hiṁsakanendare sālade? Jāraneyu chōraneyu hiṁsakāraneyu Nā neneyalu namō namō namō Śrī Kṛṣṇa ॥