Haridasa Sahitya — Vyasadasa

Ennantha bhaktaru ananta ninagiharu

ಎನ್ನಂಥ ಭಕ್ತರು ಅನಂತ ನಿನಗಿಹರು

Composer: Jagannatha Dasaru · Deity: Narayana · Genre: Bhakti

Kannada lyrics

ಎನ್ನಂಥ ಭಕ್ತರು ಅನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ | ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ ಭಿನೈಪೆ ನಿನ್ನಾ ಸಲಹೆಂದೂ|| PA || ಪತೀತನಾನಾದರು ಪತೀತಪಾವನ ನೀನು ರತಿನಾಥ ಜನಕ ನಗಪಾಣಿ || ರತಿನಾಥ ಜನಕ ನಗಪಾಣಿ ನೀನಿರಲು ಇತರ ಚಿಂತ್ಯಾಕೋ ಎನಗಿನ್ನು || 1 || ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು ಮನದಾ ವ್ರತ್ತಿಗಳನ್ನು ಸ್ರಜಿಸುವಿ || ಮನದಾ ವ್ರತ್ತಿಗಳನ್ನು ಸ್ರಜಿಸೀ ಸಂಕರ್ಷಣನೆ ನಿನ್ನ ಕರುಣಕ್ಕೆ ಎಣೆಗಾನೆ || 2 || ನಾನಾ ಪದಾರ್ಥದೊಳು ನಾನಾ ಪ್ರಕಾರದಲಿ ನೀನಿದ್ದು ಜಗವಾ ನಡೆಸುವೀ || ನೀನಿದ್ದು ಜಗವಾ ನಡೆಸುವೀ ಹರಿ ನೀನೆ ನಾನೆಂಬೋ ನರಗೆ ಗತಿ ಉಂಟೆ || 3 || ಎನ್ನಪ್ಪ ಎನ್ನಮ್ಮ ಎನ್ನಯ್ಯ ಎನ್ನಣ…

Transliteration

Ennantha bhaktaru ananta ninagiharu ninnantha svami enagilla | ninnantha svami enagilla adarinda bhinaipe ninna salahendu|| pa || patitananadaru patitapavana ninu ratinatha janaka nagapani || ratinatha janaka nagapani niniralu itara cintyako enaginnu || 1 || manadolage niniddu manavendenisikondu manada vrttigalannu srajisuvi || manada vrttigalannu srajisi sankarsanane ninna karunakke enegane || 2…