Haridasa Sahitya — Vyasadasa

Nanenu madideno venkataraya

ನಾನೇನು ಮಾಡಿದೆನೋ ವೆಂಕಟರಾಯ

Composer: Purandara Dasaru · Deity: Srinivasa / Venkatesha · Genre: Bhakti

Kannada lyrics

ನಾನೇನು ಮಾಡಿದೆನೋ ವೆಂಕಟರಾಯ ನೀನೆನ್ನ ಕಾಯಬೇಕೋ || ಪಲ್ಲವಿ || ಮಾನಾಪಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ || ರಕ್ಕಸನಲ್ಲವೇನೋ ಪ್ರಹ್ಲಾದನು ಚಿಕ್ಕವ ಧ್ರುವನಲ್ಲವೆ ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ ಅಕ್ಕನ ಮಗನೇನೋ ವೆಂಕಟರಾಯ || ೧ || ಕರಿರಾಯ ಕರೆಸಿದನೆ ದ್ರೌಪದಾದೇವಿ ಬರೆದೋಲೆ ಕಳುಹಿದಳೆ ವರಋಷಿ ಪತ್ನಿ ಕಲ್ಲಾಗಿ ಸ್ತ್ರೀಯಾದದ್ದು ಧರೆಯೆಲ್ಲ ಅರಿಯದೇನೋ ವೆಂಕಟರಾಯ || ೨ || ಒಪ್ಪಿಡಿಯವಲಕ್ಕಿಯ ತಂದವನಿಗೆ ಒಪ್ಪಿ ಕೊಟ್ಟೆಯೊ ಭಾಗ್ಯವ ಸರ್ಪಶಯನ ಶ್ರೀ ಪುರಂದರವಿಠಲ ಅಪ್ರಮೇಯನೆ ಸಲಹೋ ವೆಂಕಟರಾಯ || ೩ ||

Transliteration

Nanenu madideno venkataraya Ninenna kayabeko || pallavi || Manapamanavu ninnadu enagenu Dinarakshaka tirupatiya venkataraya || anu pallavi || Rakkasanallaveno prahladanu Cikkava dhruvanallave Ukki baruva karma madidajamila nimma Akkana maganeno venkataraya || 1 || Kariraya karesidane draupadadevi Baredole kaluhidale Vara^^rushi patni kallagi striyadaddu Dhareyella ariyadeno venkataraya || 2 || Opp…