Haridasa Sahitya — Vyasadasa

Sodakshetrave divya kshetra

ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ

Composer: Haridasa · Deity: Vishnu · Genre: Dasara Pada

Kannada lyrics

ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ವಾದಿರಾಜರು ವಾದದಿಂದ ವಾದಿಸಿ ವೀರಶೈವರ ಗೆದ್ದ ಕ್ಷೇತ್ರ ||pa|| ಒಂದು ಭಾಗದಿ ರೂಪ್ಯಪೀಠ ಮ- ತ್ತೊಂದು ಭಾಗದಿ ಸೋದಾಕ್ಷೇತ್ರ ಕುಂದು ಎಳ್ಳಷ್ಟಿಲ್ಲದೆ ತೋರ್ಪು ದೆಂದು ಹರಿಭಕ್ತರಾದರಿಸುವರು ||1|| ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆ ವೈಕುಂಠನಂತಾಸನಗಳು ಒಂದಾಗಿ ಶೋಭಿಸುತಿರುವ ಚೆಂದವೇನೆಂದು ಪೇಳಲಿ ಮನವೆ ||2|| ರಾಜೇಶ ಹಯಮುಖ ಚರಣ ಕಂಜ ಮಧುಪನಂತಿರುವ ಶ್ರೀಭಾವಿ- ಕಂಜಜಾತನ ಪದಕರುಹ ವಾದಿರಾಜರಾಯರ ದಿವ್ಯ ಕ್ಷೇತ್ರ ||3||

Transliteration

Sodakshetrave divya kshetra Banda janarigishtavaniva kshetra Vadirajaru vadadinda vadisi Virasaivara gedda kshetra ||pa|| Ondu bagadi rupyapitha ma- Ttondu bagadi sodakshetra Kundu ellashtillade torpu Dendu haribaktaradarisuvaru ||1|| Onde sthanadi svetadvipa matte Vaikunthanantasanagalu Ondagi sobisutiruva Cendavenendu pelali manave ||2|| Rajesa hayamuka carana Kanja madhupanantiruva sribavi- Kan…