Haridasa Sahitya — Vyasadasa
Snana madidarinnenu Palavo
ಸ್ನಾನ ಮಾಡಿದರಿನ್ನೇನು ಫಲವೊ
Composer: Vijaya Dasaru · Deity: Hari · Genre: Ugabhoga
Kannada lyrics
ಸ್ನಾನ ಮಾಡಿದರಿನ್ನೇನು ಫಲವೊ ಮೌನ ಮಾಡಿದರಿನ್ನೇನು ಫಲವೊ ದಾನ ಮಾಡಿದರಿನ್ನೇನು ಫಲವೊ ಸ್ನಾನ ಮೌನ ದಾನ ನಾನಾ ಕರ್ಮವೆಲ್ಲ ಭಾನು ಉದಯದಲಿ ನೀನೆದ್ದು ಭಕುತಿಲಿ ಶ್ರೀ ನಾರಾಯಣನೆಂಬೊ ನಾಮ ಆನಂದವಾಗಿ ಒಮ್ಮೆ ಕೊನೆ ನಾಲಿಗೆಯಿಂದ ನೀ ನೆನೆಯೊ ನೆನೆಯೊ ಮನವೆ e್ಞÁನ ಗೋಚರ ವಿಜಯವಿಠ್ಠಲನ್ನ ಧ್ಯಾನದಲ್ಲಿ ಒಮ್ಮೆ ನೆನೆದರೆ ಸಾಕು ಸ್ನಾನ ಮಾಡಿದರಿನ್ನೇನುಂಟು||
Transliteration
Snana madidarinnenu Palavo Mauna madidarinnenu Palavo Dana madidarinnenu Palavo Snana mauna dana nana karmavella Banu udayadali nineddu Bakutili Srinarayananembo nama Anandavagi omme konenaligeyinda Ni neneyo ni neneyo manave Snana madidarinnenu Pala J~janagocara vijayavithalanna Dhyanadali omme nenedare saku Snana madidarinnenu untu |