Haridasa Sahitya — Vyasadasa

Smarisu guru santatiyanu manave

ಸ್ಮರಿಸು ಗುರು ಸಂತತಿಯನು ಮನವೇ

Composer: Jagannatha Dasaru · Deity: Guru Parampara · Genre: Dasara Pada

Kannada lyrics

ಸ್ಮರಿಸು ಗುರು ಸಂತತಿಯನು ಮನವೇ ||pa|| ಸ್ಮರಿಸು ಗುರು ಸಂತತಿಯ ಸರ್ವಕಾಲಗಳಲ್ಲಿ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ||a.pa|| ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಗುರುಡವಾಹನ ತೀರ್ಥ ಕೈವಲ್ಯ ಯತಿವರರ ||1|| ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಮೌನಿಕುಲವರ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ ||2|| ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ ||3|| ವಿದ್…

Transliteration

smarisu guru santatiyanu manavE ||pa|| smarisu guru santatiya sarvakAlagaLalli poreva hari caturavidha puruShArthagaLanittu ||a.pa|| parama haMsAKya hari gurutamanenisutippa paramEShThi tatsutaru sanakAdyarA karakamala sanjAta kUrmAsa j~jAnanidhi guruDavAhana tIrtha kaivalya yativarara ||1|| j~jAnESa paratIrtha satya praj~ja prAj~ja sUnu sutapOrAja varakumArA maunikulavara acyuta prEkSharanGrigaLa…