Haridasa Sahitya — Vyasadasa
Smariso sarvada hariya
ಸ್ಮರಿಸೊ ಸರ್ವದ ಹರಿಯ
Composer: Purandara Dasaru · Deity: Hari · Genre: Bhakti
Kannada lyrics
ಸ್ಮರಿಸೊ ಸರ್ವದ ಹರಿಯ ||ಪ|| ಸುರವರ ದೊರೆಯ ಕರುಣಾನಿಧಿಯ ||ಅ.ಪ|| ಮುನಿಜನ ವಂದ್ಯನ ಮನಸಿಜನಯ್ಯನ ಮನದಲಿ ಅನುದಿನ ನೆನೆಯೊ ಹರಿಯ ||೧|| ವರಗುಣಪೂರ್ಣನ ಸರಸಿಜನೇತ್ರನ ಪರವಾಸುದೇವನ ಪ್ರಾಣದ ಪ್ರಿಯನ ||೨|| ವೆಂಕಟರಮಣನ ಸಂಕಟಹರಣನ ಲಕ್ಷ್ಮೀರಮಣನ ಪುರಂದರವಿಠಲನ ||೩||
Transliteration
Smariso sarvada hariya ||pa|| Suravara doreya karunanidhiya ||a.pa|| Munijana vandyana manasijanayyana Manadali anudina neneyo hariya ||1|| Varagunapurnana sarasijanetrana Paravasudevana pranada priyana ||2|| Venkataramanana sankataharanana Lakshmiramanana purandaravithalana ||3||