Haridasa Sahitya — Vyasadasa
Smariso santata manava guruvishnu teerthara
ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥರ
Composer: Karpara Narahari Dasaru · Deity: Shri Madanoor Vishnuteertharu · Genre: Dasara Pada
Kannada lyrics
ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥರ ||pa|| ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರ ಕರುಣದಿ ಜನಿಸಿ ಧರೆಯೊಳು ನಿರುತ ಸ್ಮರಿಸುವ ಶರಣು ಜನರಘ ತರಿದ ಭೀಷ್ಠೆಯ ಗರಿವರಂಘ್ರಿಯ ||a.pa|| ಪುರಹರಾಂಶಜರೆನಿಸಿ ಬಾಳಾಚಾರ್ಯರ ತರುಣಿ ಗರ್ಭದಿ ಜನಿಸಿ ಮಳಖೇಡ ಮಂದಿರ ಗುರುನಾಮದಲಿ ಕರಿಸಿ ವಟು ವ್ರತವ ಧರಿಸಿ ಗುರುಕುಲದಿ ರಾಮಾರ್ಯರಿಂದಲಿ ಅರಿತು ವೇದವೇದಾಂತ ಶಾಸ್ತ್ರವ ಗುರುಸುತನ ಮಹಜ್ವರ ಹರಣ ನರಹರಿಯ ಮಂತ್ರವ ಜಪಿಸಿದವರನು ||1|| ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ…
Transliteration
smariso santata mAnava guruviShNu tIrthara ||pa|| smariso TIkeya viracisida guruvarara karuNadi janisi dhareyoLu niruta smarisuva SaraNu janaraGa tarida BIShTheya garivaranGriya ||a.pa|| puraharAMSajarenisi bALAcAryara taruNi garBadi janisi maLaKEDa mandira gurunAmadali karisi vaTu vratava dharisi gurukuladi rAmAryarindali aritu vEdavEdAnta SAstrava gurusutana mahajvara haraNa narahariya mantrava…