Haridasa Sahitya — Vyasadasa

Smarisi sukiselo maanava

ಸ್ಮರಿಸಿ ಸುಖಿಸೆಲೊ ಮಾನವಾ

Composer: Gopala Dasaru · Deity: Gopala Dasaru · Genre: Dasara Pada

Kannada lyrics

ಸ್ಮರಿಸಿ ಸುಖಿಸೆಲೊ ಮಾನವಾ ||pa|| ಸ್ವಾನುಭಾವದಿಂದ ಸುಖವಬಡಿಪ ಗೋಪಾಲದಾಸ ರಾಜರಡಿಗಳನುದಿನಾ ||a.pa|| ಅಪಾರ ಜನುಮದ ದಾಸ್ಯಹರಿಸಿ ಸುಖಸಾರ ಸುರಿಪರನುದಿನಾ ||1|| ಸತ್ಯವಾದ ವಚನ ಸತ್ವಜೀವರಿಷ್ಟಗರೆವ ಚಿತ್ತದೊಳಗನುದಿನಾ ||2|| ಸರ್ವ ವಿಧದಿ ತೋಷಬಡಿಪ ತಂದೆವರದಗೋಪಾಲವಿಠಲನೇ ಸಾಕ್ಷಿಯಾಗಿಪ್ಪನನುದಿನಾ ||3||

Transliteration

Smarisi sukiselo manava ||pa|| Svanubavadinda sukavabadipa gopaladasa rajaradigalanudina ||a.pa|| Apara janumada dasyaharisi sukasara suriparanudina ||1|| Satyavada vacana satvajivarishtagareva cittadolaganudina ||2|| Sarva vidhadi toshabadipa tandevaradagopalavithalane sakshiyagippananudina ||3||