Haridasa Sahitya — Vyasadasa
Smarisi beduve na
ಸ್ಮರಿಸಿ ಬೇಡುವೆ ನಾ
Composer: Jagannatha Dasaru · Deity: Raghavendra Teertharu · Genre: Dasara Pada
Kannada lyrics
ಸ್ಮರಿಸಿ ಬೇಡುವೆ ನಾ – ಹೇ ಗುರುಸಾರ್ವಭೌಮಾ || ಪ || ನಿರುತ ನೀ ಪೊರೆಯನ್ನ – ವಾದಿಗಜಸಿ೦ಹ || ಅ || ದಿತಿಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯ ಮತಪಿಡಿದು ಹರಿಮಹಿಮೆ ಪಿತಗೆ ಪೇಳಿ ಖತಿಗೊ೦ಡು ನಿನ್ನ ಮೂರುತಿ ತೋರೆನಲು ಶ್ರೀ ಪತಿಯ ಸ್ತ೦ಭದಿ ಕರೆದ ಪ್ರಲ್ಹಾದರಾಜ || ೧ || ಬಾಲ್ಯದಲಿ ಯತಿಯಾಗಿ ಲೀಲೆಯಿ೦ದಲಿ ಭೂಮಿ ಪಾಲಗೊದಗಿರ್ದ ಕುಯೋಗ ಬಿಡಿಸಿ ಖೂಳ ಮಾಯ್ಗಳ ಜಯಿಸಿ ಚ೦ದ್ರಿಕಾ ಗ್ರ೦ಥವನು ಪೇಳಿ ಹಿರಿಪೀಠವೇರಿದ ವ್ಯಾಸರಾಜ || ೨ || ಕಾಮರಿಪುನುತ ಮೂಲರಾಮಪದಯುಗಕುಮುದ ಸೋಮನೆನಿಸುವ ಭಕ್ತ ಸ್ತೋಮಕೆಲ್ಲ ನೇಮದಿ೦ದಲಿ ವಿವಿಧ ಕಾಮಿತಾರ್ಥ ಸ್ಫುಟಿತ ಹೇಮಸನ್ನಿಭಗಾತ್ರ ಪಾವನಚರಿತ್ರ || ೩ || ಶಾ೦ತತೆಯ ಪೊ೦ದಿ ಮ೦ತ್ರಾಲಯದಿ…
Transliteration
Smarisi beduve na – he gurusarvabauma || pa || Niruta ni poreyanna – vadigajasinha || a || Ditisutage sutanenisi atimudadi suramuniya Matapididu harimahime pitage peli Katigondu ninna muruti torenalu sri Patiya stanbadi kareda pralhadaraja || 1 || Balyadali yatiyagi lileyindali bumi Palagodagirda kuyoga bidisi Kula maygala jayisi chandrika granthavanu Peli hiripithaverida vyasaraja || 2 || Kamarip…