Haridasa Sahitya — Vyasadasa
Smarisi badukiro shreepadaraajara
ಸ್ಮರಿಸಿ ಬದುಕಿರೋ ಶ್ರೀಪಾದರಾಜರಾ
Composer: Haridasa · Deity: Sripadarajaru · Genre: Dasara Pada
Kannada lyrics
ಸ್ಮರಿಸಿ ಬದುಕಿರೋ ಶ್ರೀಪಾದರಾಜರಾ | ಕಷ್ಟ ಕಳೆದು ಇಷ್ಟವ ಕೊಡುವ ದಿವ್ಯ ಪಾದರಾ || ಪ || ದಾಸಕೂಟದಿ ಅಗ್ರಗಣ್ಯರೆನಿಪರ | ದಿಟದಿಂದಲಿ ಭವಸಾಗರ ದಾಟಿಸುವರಾ || ೧ || ಜ್ಞಾನದಾಯಕರ ಭವ್ಯ ಭೋಜನ ಭೋಕ್ತರ | ಕೀರ್ತಿವಂತರ ಅನೇಕ ಮಹಿಮದಾಂತರ || ೨ || ಅಲವಭೋದರ ಮತದಿ ಸುಲಭ ಚಂದಿರ | ಭಜಿಪ ಭಕ್ತರ ಭಯವ ಪರಿಹರಿಸುವರ || ೩ || ಮುಖ್ಯದ್ವಾರದಿ ಇದ್ದ ರಂಗ ವಿಠ್ಠಲನ | ಅಂತರಂಗದಿ ಮಹಾ ಮಂಗಳಾಂಗನಾ || ೪ || ಲೆಖ್ಖವಿಲ್ಲದೇ ಪೃಥ್ವಿ ತಿರುಗಿಬಂದರೂ | ವ್ಯರ್ಥವಲ್ಲದೇ ಗುರು ಭಕ್ತಿ ದೊರೆಯದು || ೫ || ದಾಸರಾದರೆ ಮಾತ್ರ ಸೂಸಿ ಕಾಯುವ | ಲಕ್ಷ್ಮೀಶ ವಿಠ್ಠಲನ ತಂದು ಅಂದೆ ತೋರುವ || ೬ ||
Transliteration
Smarisi badukiro shreepaadaraajaraa | kashta kaledu ishtava koduva divya paadaraa || pa || Daasakootadi agraganyarenipara | ditadindali bhavasaagara daatisuvaraa || 1 || J~jaanadaayakara bhavya bhojana bhoktara | keertivantara aneka mahimadaantara || 2 || Alavabhodara matadi sulabha chandira | bhajipa bhaktara bhayava pariharisuvara || 3 || Mukhyadwaaradi idda ranga viththalana | antaramgadi mahaa…