Haridasa Sahitya — Vyasadasa
Smarane onde salade
ಸ್ಮರಣೆ ಒಂದೇ ಸಾಲದೆ
Composer: Purandara Dasaru · Deity: Hari · Genre: Bhakti
Kannada lyrics
ಸ್ಮರಣೆ ಒಂದೇ ಸಾಲದೆ ಗೋವಿಂದನ ನಾಮ ಒಂದೇ ಸಾಲದೆ ||ಪ|| ಪರಮ ಪುರುಷನನ್ನು ನೆರೆ ನಂಬಿದವರಿಗೆ ದುರಿತ ಬಾಧೆಗಳ ಗುರುತು ತೋರುವುದೆ ||ಅ.ಪ|| ಕಡು ಮೂರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು ಜಡನಾದರೇನಲ್ಪಜಾತಿಯಾದರೇನು ಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ ||೧|| ಪಾತಕಿಯಾದರೇನು ಸರ್ವಪ್ರಾಣಿ ಘಾತಕಿಯಾದರೇನು ನೀತಿಯ ಬಿಟ್ಟು ದುಷ್ಕರ್ಮಿಯಾದರೇನು ಪ್ರೀತಿಯಿಂದಜಾಮಿಳನ ಸಲಹಿದ ಹರಿಯ ||೨|| ಸಕಲ ತೀರ್ಥಯಾತ್ರೆಯ ಮಾಡಿದಂಥ ನಿಖಿಲ ಪುಣ್ಯದ ಫಲವು ಭಕುತಿ ಪೂರ್ವಕವಾಗಿ ಬಿಡದನುದಿನದಲ್ಲಿ ಪ್ರಕಟ ಪುರಂದರವಿಠಲನ ನಾಮದ ||೩||
Transliteration
Smarane onde salade govindana Nama onde salade ||pa|| Parama purushanannu nere nambidavarige Durita badhegala gurutu toruvude ||a.pa|| Kadu murkanadarenu dushkarmadim Todedatanadarenu Jada nada renalpajatiyadarenu Bidade prahladanna salahida hariya ||1|| Patakiyadarenu sarvaprani Gatakiyadarenu Nitiya bittu dushkarmiyadarenu Pritiyindajamilana salahida hariya ||2|| Sakala tirthayatreya madidamtha…