Haridasa Sahitya — Vyasadasa
Sivana nodiro indu stavana madiro
ಶಿವನ ನೋಡಿರೊ ಇಂದು ಸ್ತವನ ಮಾಡಿರೊ
Composer: Vijaya Dasaru · Deity: Shiva / Rudra Devaru · Genre: Bhakti
Kannada lyrics
ಶಿವನ ನೋಡಿರೊ ಇಂದು ಸ್ತವನ ಮಾಡಿರೊ | ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ ||pa|| ಅಂತಕಾಪುರ ವೈರಿ | ದಿನಾಂತ ವೃಷಭನೇರಿ | ಶಾಂತಿ ಸಹಿತ ಜನರಂಗಣದಿ | ನಿಂತು ಮಾತು | ಲಾಲಿಪ ಮಹಿಮ ||1|| ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ | ವಸುಧೆಯಾಳಗೆ ಬಲಿದಾನೇಕಾ | ದಶರುದ್ರರೊಳು ಬಲು ಗುಣವಂತ ||2|| ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ | ಮೋಕ್ಷಕೆ ಮನಸು ಕೊಡುವ | ನಿಟಲೇಕ್ಷವಂತ ಶಾಂತ ||3|| ಕರಿಚರ್ಮಾಂಬರಧಾರಿ ವಾರಿ | ಧರ ತ್ರಿಶೂಲ ಡಮರುಗ ಪಾಣಿ |ಶರಗದ್ದುಗೆ ಸುಮೇರುವೇದಾ | ತುರಗವಾಗಿರಲಂದು ಅಂದದಿ||4|| ನಮಿಸಿ ಬರಲಿ ಬೇಡಿ ಭವದಿ | ಮಮತೆ ಓಡಿಸಿ ಭಕುತಿಯಿಂದಲಿ |ರಮೆಯರಸ ವಿ…
Transliteration
Antakapura vairi | dinanta vrushabaneri | Santi sahita janaranganadi | nintu matu | Lalipa mahima ||1|| Surajanate prita sarvada | asura vairiyu nemadinda | Vasudheyalage balidaneka | Dasarudrarolu balu gunavanta ||2|| Daksha prajesvaranadhvara | rakshane madida dakshamurti | Mokshake manasu koduva | Nitalekshavamta santa ||3|| Karicarmambaradhari vari | dhara trisula Damaruga pani |Saragadduge su…