Haridasa Sahitya — Vyasadasa
Siva darusana namagayitu kele
ಶಿವ ದರುಶನ ನಮಗಾಯಿತು ಕೇಳೆ
Composer: Purandara Dasaru · Deity: Shiva / Rudra Devaru · Genre: Bhakti
Kannada lyrics
ಶಿವ ದರುಶನ ನಮಗಾಯಿತು ಕೇಳೆ ಶಿವರಾತ್ರಿಯ ಜಾಗರಣೆ || ಪಾತಾಳ ಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು || ಬೇಡಿವ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು ಆಡುತ ಪಾಡುತ ಏರುತ ಬಸವನ ಆನಂದದಲಿ ನಲಿದಾಡುವನು || ಶಿಖರವ ಕಂಡೆನು ಪುರಂದರವಿಠಲನ ಹರಿನಾರಾಯಣ ಧ್ಯಾನದಲೆ ||
Transliteration
Siva darusana namagayitu kele Sivaratriya jagarane || Patala gangeya snanava madalu Patakavella pariharavu Jyotirlingana dhyanava madalu Dyutagalilla anudinavu || Bediva varagala koduvanu tayi Brahmana raniya noduvanu Aduta paduta Eruta basavana Anamdadali nalidaduvanu || Sikarava kandenu purandaravithalana Harinarayana dhyanadale ||