Haridasa Sahitya — Vyasadasa

Siteya bumijateya

ಸೀತೆಯ ಭೂಮಿಜಾತೆಯ

Composer: Vijaya Dasaru · Deity: Seetha · Genre: Bhakti

Kannada lyrics

ಸೀತೆಯ ಭೂಮಿಜಾತೆಯ ಜಗ-| ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||pa|| ಕ್ಷೀರ ವಾರಿಧಿಯ ಕುಮಾರಿಯ ತನ್ನ | ಸೇರಿದವರ ಭಯಹಾರಿಯ || ತೋರುವಳು ಮುಕ್ತಿಹಾರಿಯ ಸರ್ವ | ಸಾರ ಸುಂದರ ಶ್ರೀನಾರಿಯ ||1|| ಈಶಕೋಟಿಯೊಳ್ ಗಣನೆಯ ಸ್ವಪ್ರ-| ಕಾಶವಾದ ಗುಣಶ್ರೇಣಿಯ || ಈಶಾದ್ಯರ ಪೆತ್ತ ಕರುಣಿಯ ನಿ-| ರ್ದೋಷ ವಾರಿಧಿಕಲ್ಯಾಣಿಯ||2|| ವಿಜಯವಿಠ್ಠಲನ್ನ ರಾಣಿಯ ಪಂ-| ಕಜಮಾಲೆ ಪಿಡಿದ ಪಾಣಿಯ || ವಿಜಯಲಕ್ಷ್ಮಿ ಗಜಗಮನೆಯ ನಿತ್ಯ | ಸುಜನವಂದಿತೆ ಅಹಿವೇಣಿಯ ||3|| Siteya bumijateya jaga-| Nmateya smarisi vikyateya ||pa||

Transliteration

Kshira varidhiya kumariya tanna | Seridavara bayahariya || Toruvalu muktihariya sarva | Sara sumdara srinariya ||1|| Isakotiyol gananeya svapra-| Kasavada gunasreniya || Isadyara petta karuniya ni-| Rdosha varidhikalyaniya||2|| Vijayaviththalanna raniya pan-| Kajamale pidida paniya || Vijayalakshmi gajagamaneya nitya | Sujanavandite ahiveniya ||3||