Haridasa Sahitya — Vyasadasa
Siri Ramana tava charana
ಸಿರಿರಮಣ ತವ ಚರಣ ಸೇವೆ
Composer: Jagannatha Dasaru · Deity: Vishnu · Genre: Philosophy
Kannada lyrics
ಸಿರಿರಮಣ ತವ ಚರಣ ಸೇವೆ ದೊರಕುವುದು ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ|| ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ ನರಕಕ್ಕೆ ಗುರಿಯಾದೆನೋ ಹರಿಯೆ|| ಅ.ಪ|| ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ ವಶವಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ ಅಶನವೆರಡ್ಹೊತ್ತುಣ್ಣುತ ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮ ಗಂಧಿಯ ರಮಿಸುತ ಸತತ||1|| ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ ಹಿರಿದಾಗಿ ಮನೆ ಕಟ್ಟದೆ ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು ಧರಧರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ ಕೊರೆಸಿ ಬಾಗಿಲು ಮಾಡಿದ…
Transliteration
Siriramana tava charana dorakuvudu hyaanginnu Parama paapishta naanu || pa || Narahariye ninna naamasmarane maadade| narakakke Guriyaadeno || a pa || Kere bhaavi mandiragalanu kedahi naa hiridaagi mane kattide | Nerenadevamaargadaa aravattigegalanu tharathadibicchi tegede | Paramasan bhramadinda araleya mara koresi baagila maadide | Vara mandirava mugisi harusha chitrava tegesi paripariya soukhya…