Haridasa Sahitya — Vyasadasa

Simha roopa nadha sri hari

ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ

Composer: Purandara Dasaru · Deity: Narasimha · Genre: Bhakti

Kannada lyrics

ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ ||ಪ|| ಒಮ್ಮನದಿಂದ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯುವೆನೆಂದ ಹರಿ ||ಅ.ಪ|| ತರಳನು ಕರೆಯೆ ಸ್ಥಂಭವು ಬಿರಿಯೇ ತುಂಬಾ ಉಗ್ರವನು ತೋರಿದನು ಕರುಳನು ಬಗೆದು ಕೊರಳೊಳಗಿಟ್ಟು ತರಳನ ಸಲಹಿದ ಶ್ರೀ ನರಸಿಂಹನೆ ||೧|| ಭಕ್ತರೆಲ್ಲ ಕೂಡಿ ಬಹು ದೂರ ಓಡಿ ಪರಮ ಶಾಂತವನು ಬೇಡಿದರು ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ ಪರಮ ಹರುಷವನು ಹೊಂದಿದ ಶ್ರೀ ಹರಿ ||೨|| ಜಯ ಜಯ ಜಯವೆಂದು ಹೂವನು ತಂದು ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ ಭಯ ನಿವಾರಣ ಭಾಗ್ಯ ಸ್ವರೂಪನೇ ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ ||೩||

Transliteration

Simharoopanaada sri hariye sri naama gireeshane| ommanadinda nimmana bajisalu sammatha dhinda kayvanendu hari|| Tharulanu kariye sthambavu biriye thumba ugravanu thoridanu karalanu bagedu thankoralolagittu tharalanu salahida sri narasimhane||1|| baktharellaru kudi bahu dooravu vodi parama shantavanu bedidaru karadu thasiriyanu thodemele kulisida parama harushavanu pondida sri hari||2|| jaya jayaja…