Haridasa Sahitya — Vyasadasa

Shri Venkatesha Sthava raja

ಶ್ರೀರಮಣ ಸರ್ವೇಶ ಸರ್ವದ |

Composer: Jagannatha Dasaru · Deity: Srinivasa / Venkatesha · Genre: Dasara Pada

Kannada lyrics

ಶ್ರೀರಮಣ ಸರ್ವೇಶ ಸರ್ವದ | ಸಾರಭೋಕ್ತ ಸ್ವತಂತ್ರ ಸರ್ವದ | ಪಾರಮಹಿಮೋಧ್ದಾರ ಸದ್ಗುಣ ಪೂರ್ಣ ಗಂಭೀರ | ಸಾರಿದವರಘದೂರಗೈಸಿ ಸೂರಿಜನರಿಗೆ ಸೌಖ್ಯ ನೀಡುವ | ಧೀರವೇಂಕಟರಮಣ ಕರುಣದಿ ಪೂರೆಯೋ ನೀ ಎನ್ನ || ೧ || ಘನ್ನಮಹಿಮಾಪನ್ನಪಾಲಕ | ನಿನ್ನಹೊರತಿನ್ನನ್ಯದೇವರ | ಮನ್ನದಲಿನಾನೆನೆಸೆನೆಂದಿಗು ಬನ್ನಪಡಿಸದಿರು | ಎನ್ನಪಾಲಕ ನೀನೆ ಇರುತಿರೆ ಇನ್ನು ಭವ ಭಯವೇಕೆ ಎನಗೆ | ಚನ್ನ ವೇಂಕಟರಮಣ ಕರುಣದಿ ಪೊರೆಯೋ ನೀ ಎನ್ನ || ೨ || ಯಾಕೆ ಪುಟ್ಟದು ಕರುಣ ಎನ್ನೊಳು | ಸಾಕಲಾರೆಯ ನಿನ್ನ ಶರಣನ | ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ | ನೋಕನೀಯಕ ನೀನೆ ಎನ್ನನು | ಜೋಕೆಯಿಂದಲಿ ಕಾಯೋ ಬಿಡದೆ | ಏಕದೇವನು ನೀನೆ ವೇಂಕಟ ಶೇಷಗಿ…

Transliteration

Sriramana sarvesa sarvada | Sarabokta svatantra sarvada | Paranahinodhdara sadguna purna ganbira | Saridavaragaduragaisi surijanarige saukya niduva | Dhiravenkataramana karunadi pureyo ni enna || 1 || Ganna nahina pannapalaka | Ninna horatinnanyadevara | Nannadalinane nesenendigu bannapadisadiru | Ennapalaka nine irutire innu Bava bayaveke enage | Channa venkataranana karunadi poreyo ni enna || 2…