Haridasa Sahitya — Vyasadasa

Shri venkatesha kalyana

ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ

Composer: Vadirajaru · Deity: Srinivasa / Venkatesha · Genre: Dasara Pada

Kannada lyrics

ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ||pa|| ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂ||a.pa|| ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ದಾರಿಗರ್ಪಿತವೆಂದರುಹಿ ಮರಳೀ ತೆರಳಿದ ಸುರಮುನಿವಚನದಿ ಭೃಗುಮುನಿವರ ಪೋಗಿ ಹರವಿರಂಚಿಯರ ನೋಡಿದಾ ಉರುತರಕೋಪದಿ ನಿಲ್ಲುತ ಪರಮಪುರುಷರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ ಹರುಷದಿ ಶ್ರೀಹರಿ ಉರಗಶಯನನಾಗಿ ಪರಮಯೋಗನಿದ್ರೆ ಮಾಡುತಾ ಅರಿಯದಂತೆ ತಾ ನಟಿಸುತ ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವ…

Transliteration

pannangaSayana prasannara pAlipa Gannamahima nInennanuddharisU||a.pa|| vara suramunigaLa vRunda nerahida yAgagaLinda paramAdaradindiruva samayadi nArada muni bandodagi ninda i- dArigarpitaveMdaruhi maraLI teraLida suramunivacanadi BRugumunivara pOgi haraviranciyara nODidA urutarakOpadi nilluta paramapuruSharalleMdennuta vaikunThavannE sAruta haruShadi SrIhari uragaSayananAgi paramayOganidre mADutA…