Haridasa Sahitya — Vyasadasa
Shri madhva rayara seve dorakuvadu
ಶ್ರೀಮಧ್ವರಾಯರ ಸೇವೆ ದೊರಕುವದು
Composer: Purandara Dasaru · Deity: Sri Madhwacharyaru · Genre: Bhakti
Kannada lyrics
ಶ್ರೀಮಧ್ವರಾಯರ ಸೇವೆ ದೊರಕುವದು ಜನುಮ ಸಫಲ ಕಾಣಿರೋ ಶ್ರೀಮದಾನಂದತೀರ್ಥರ ಪಾದ ನೆನೆವರು ಸಾಮಾನ್ಯ ಸುರರು ಕಾಣೆ ಬೊಮ್ಮನ ಆಣೆ ||ಪ|| ಜಗವು ಸತ್ಯವ ಅಲ್ಲ ಜಡಜೀವ ಭೇದವಿಲ್ಲ ಅಗುಣನು ಪರ ಬೊಮ್ಮನು ಹೀಗೇ ನುಡಿದ ಜನರ ನಿಗಮ ಶಾಸ್ತ್ರದಿ ಗೆದ್ದು ಜಗ ಸತ್ಯ ಸಗುಣೋದ ಬ್ರಹ್ಮ ಎಂದು ಪೇಳುವ || ಹರಿ ಸರ್ವೋತ್ತಮ ತರುವಾಯ ರಮಾದೇವಿ ಸರಸಿಜಾಸನ ಪ್ರಾಣರು ಸರಸ್ವತೀಭಾರತಿಯೆಂದು ಪೇಳ್ದಾ ಗರುಡಾನಂತ ರುದ್ರ ತರುವಾಯ ಆರು ದೇವಿಗಳು || ಸೌಪರ್ಣಿ ವಾರುಣಿ ಅನಪೂರ್ಣೆಯರು ಸಮರು ದ್ವಿಪದೀಮನ್ವಾದಿ ದೇವಿಗಳು ಈ ಪರಿ ತಾರತಮ್ಯ ಜಪಧ್ಯಾನಾರ್ಚನೆಯಿಂದ ಅಪವರ್ಗಾದಿ ಸೇವೆಯ ಮಾಡಿರೋ ಎಂತೆಂಬ || ಒಂದೊಂದು ಯುಗದಲಿ ಅನಂತ ಸೇವೆಯ ಮಾಡಿ ಚೆಂದದಿಂದಲಿ…
Transliteration
Shri madhva rayara seve dorakuvadu januma saphala kaniro Shrimad Ananda tirttara pada nenavaru samanya suraru karunya bommana Ane Jagadu satyava alla jada jiva bhedavalla agunanu para bommanu hige nudida janara nigama shastradi geddu jaga satya saguna brahma endu peluva hari sarvottama nitya taruvaya ramadevi sarasijasana pranaru sarasvati bharati garuda ananta rudra taruvaya Aru devigalu sauparni…